ಮದುವೆ ನಿರಾಕರಿಸಿದ ಕಾರಣಕ್ಕಾಗಿ ಆರೋಪಿ ಕೊಕ್ಕರ್ಣೆ ಚಿಗರೆ ಬಿಟ್ಟು ನಿವಾಸಿ ಕಾರ್ತಿಕ ಪೂಜಾರಿ ತನ್ನ ನೆರೆಮನೆಯ ರಕ್ಷಿತಾ ಪೂಜಾರಿ 24 ವರ್ಷ ಎಂಬಾಕೆಯನ್ನು ಚೂರಿಯಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದನು ಇದರಿಂದ ಗಂಭೀರವಾಗಿ ಗಾಯಗೊಂಡ ರಕ್ಷಿತಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.