ಕೇಬಲ್ ಕಳ್ಳತನ ; ಕ್ರಮಕ್ಕೆ ರೈತನ ಆಗ್ರಹ ಕೋಲಾರ ತಾಲೂಕಿನ ಗೂಳಿಗಾನಹಳ್ಳಿಯ ರೈತ ರಾಮು ಅಲಿಯಾಸ್ ಮುನಿಯಪ್ಪ ಅವರ ತೋಟದಲ್ಲಿ ಅಳವಡಿಸಿದ್ದ ಕೇಬಲ್ ಅನ್ನು ರಾತ್ರಿ ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಿ ಎಡೆಮುರಿ ಕಟ್ಟಬೇಕೆಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಮು ದೂರು ಸಲ್ಲಿಸಿದ್ದಾರೆ. ತಾಲೂಕಿನ ಹೋಳೂರು ಹೋಬಳಿಯ ಚಿನಪನಹಳ್ಳಿಯ ಅಮಾನಿಕೆರೆಯ ವ್ಯಾಪ್ತಿಯಲ್ಲಿನ ಜಮೀನಿನಲ್ಲಿ ಬೋರ್ ವೆಲ್ಗಾಗಿ ೨೫ ಹೆಚ್ಪಿಗೆ ಅಳವಡಿಸಿದ್ದ ಕೇಬಲ್ ಸುಮಾರು ೧೧ ಸಾವಿರ ಬೆಲೆ ಬಾಳುತ್ತದೆ. ಇದೇ ಕೇಬಲ್ ಇದೀಗ ಕಳುವಾಗಿದೆ. ಇತ್ತೀಚೆಗೆ ಈ ಭಾಗದ ರೈತರ ತೋಟಗಳಲ್ಲಿ ಪಂಪ್ ಸೆಟ್ ಕೇಬಲ್ ಹಾಗೂ ಮೋಟರ್ ಸ್ಟಾರ್ಟರ್ ಕಳ್ಳತ