ಮೊಳಕಾಲ್ಮುರು:- ಪಟ್ಟಣದಲ್ಲಿ ವಕೀಲರ ಸಂಘದಿಂದ ಗಣೇಶ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಬುಧವಾರ ಬೆಳಿಗ್ಗೆ ಕೋರ್ಟ್ ಆವರಣದಲ್ಲಿ ವಿಘ್ನ ನಿವಾರಕ ಗಣೇಶನನ್ನು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕಾರ್ಯಗಳನ್ನು ನಡೆಸಲಾಗಿತ್ತು. ಸಂಜೆ 5:00ಗೆ ಪಟ್ಟಣದ ಮುಖ್ಯ ರಸ್ತೆ ದೊಡ್ಡಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.