ಹಾವೇರಿ ನಗರದ ಕೂಲಿಯವರ ಓಣಿಯಲ್ಲಿ ಬುಧವಾರ ಬೆಳಗಿನ ಜಾವ ಬಿದ್ದಿದ್ದ ಬೃಹತ್ ಗಾತ್ರದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ನಿರಂತರ ಮಳೆಗೆ ಬೇರು ಸಡಿಲಗೊಂಡು ಮರ ವಿದ್ಯುತ್ ತಂತಿ ಮೇಲೆ ಉರುಳಿತ್ತು. ಸಾರ್ವಜನಿಕರಿಗೆ ಅಪಾಯವಾಗುವ ಆತಂಕ ಎದುರಾಗಿದ್ದು, ತೆರವುಗೊಳಿಸುವಂತೆ ಒತ್ತಾಯ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತುರ್ತು ಸ್ಪಂದಿಸಿ ಮರವನ್ನು ತೆರವುಗೊಳಿಸಿದ್ದಾರೆ.