ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿ ವರದಿ ತಾತ್ವಿಕವಾಗಿ ಗೆದ್ದಿದೆ ಆದರೆ ತಾಂತ್ರಿಕವಾಗಿ ಸೋತಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಅಂಬಣ್ಣ ಆರೋಲಿಕರ್ ಆರೋಪಿಸಿದರು.ಅವರು ತುಮಕೂರು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ, ಉದ್ದೇಶಿಸಿ ಶನಿವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಾತನಾಡಿದರು.ಒಳ ಮಿಸಲಾತಿನ ಜಾರಿ ಮಾಡುವ ಸಂದರ್ಭದಲ್ಲಿ ಶೇಕಡ 1 ರ ಪ್ರತಿಶತವನ್ನು ಅಲೆಮಾರಿ ಜನಾಂಗದವರಿಗೆ ಕೊಡಲು ಸಾಧ್ಯವಾಗದ ನಿಲುವು ಸರಿಯಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತೆ ಒಳ ಮೀಸಲಾತಿ ಹೋರಾಟವನ್ನ ಮುಂದುವರೆಸಲು ಅನುವು ಮಾಡಿಕೊಟ್ಟಿದೆ ಎಂದರು.