ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರದೊಂದಿಗೆ ಇಂದು ಗುಡಿಬಂಡೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಅದ್ಧೂರಿಯಾಗಿ ಆರಂಭಗೊಂಡಿತು. ತಾಲ್ಲೂಕಿನ ವಿವಿಧ ಹೋಬಳಿ ಹಾಗೂ ಶಾಲೆಗಳ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು. ಹಾಗೂ ಕ್ರೀಡಾ ಅಭಿಮಾನಿಗಳು. ಪಾಲ್ಗೊಂಡು. ಕ್ರೀಡಾಕೂಟಕ್ಕೆ ವಿಶೇಷ ಕಳೆತಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೈಹಿಕ ಶಿಕ್ಷಕರ ಪರಿವೀಕ್ಷಕ ಅಂಜನಪ್ಪ ಅವರು, “ಕರ್ನಾಟಕದಲ್ಲಿ ದಸರಾ ಕ್ರೀಡಾಕೂಟವು ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ರಾಜ–ಮಹಾರಾಜರ ಕಾಲದಿಂದಲೂ ದಸರಾ ಹಬ್ಬವು ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತಿತ್ತು.