ಮಂಡ್ಯ : 2025- 26 ನೇ ಸಾಲಿ ನಲ್ಲಿ 5000 ಬೀದಿ ನಾಯಿಗಳಿಗೆ ಸಂತನಾಹರಣ ಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದ್ದಾರೆ. ಸೋಮವಾರ ಸಾಯಂಕಾಲ 5.30 ರ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಚಿಕಿತ್ಸೆ ನೀಡುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 21 ನೇ ಜಾನುವಾರು ಗಣತಿಯನ್ವಯ 24615 ಸಾಕು ನಾಯಿಗಳು ಹಾಗೂ 51531 ಬೀದಿ ನಾಯಿಗಳು ಸೇರಿ ಒಟ್ಟು 76146 ನಾಯಿಗಳಿವೆ ಎಂದರು. ಈ ಬಾರಿ ಮಂಡ್ಯ ನಗರಸಭೆಯಲ್ಲಿ 60 ಲಕ್ಷ ರೂ ಹಣವನ್ನು ಬೀದಿ ನಾಯಿಗಳ ಸಂತನಾಹರಣ ಚಿಕಿತ್ಸೆ ಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.