ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಜನ ಎಂದೆಂದೂ ಮರೆಯದೆ ಇರುವ ಸದಾ ಸ್ಮರಿಸಿಕೊಳ್ಳಬೇಕಾದಂತಹ ಹೆಸರು ಚುಟುಕು ಬ್ರಹ್ಮ ದಿನಕರ ದೇಸಾಯಿಯವರಾದ್ದಾಗಿದೆ. ಜಿಲ್ಲೆಯ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ದಿನಕರ ದೇಸಾಯಿಯವರ ಕೊಡುಗೆ ಅಪಾರ ಮತ್ತು ಸದಾ ಸ್ಮರಣೀಯವಾಗಿದೆ ಜನತಾ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಮೃತ ರಾಮರಥ ಅವರು ಹೇಳಿದರು. ಅವರು ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಇಂದು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಹಮ್ಮಿಕೊಂಡಿದ್ದ 'ದಿನಕರ ದೇಸಾಯಿಯವರ ಬದುಕು - ಬರಹ' ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.