ಮೊಳಕಾಲ್ಮುರು:- ದಲಿತ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಹಿರಿಯೂರು ನಗರದಲ್ಲಿ ಸೋಮವಾರ ಮಧ್ಯಾಹ್ನ 12:30ಕ್ಕೆ ಭಾರತೀಯ ಪರಿವರ್ತನಾ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಿಪಿಎಸ್ ರಾಜ್ಯಾಧ್ಯಕ್ಷರಾದ ಪ್ರೊಫೆಸರ್ ಹರಿರಾಮ್ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು ಉತ್ತಮ ವ್ಯಾಸಂಗ ಮಾಡಲು ನಗರದತ್ತ ತೆರಳಿದ್ದಾಳೆ, ಇಂತಹ ಪ್ರತಿಭಾವಂತ ಯುವತಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯನ್ನು ಕರೆದು ದುಷ್ಕರ್ಮಿ ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.ಯಾವುದೇ ಕುಟುಂಬದಲ್ಲಿ ಈ ರೀತಿ ಘಟನೆಗಳನ್ನು ಕುಟುಂಬಸ್ಥರು ಸಹಿಸುವುದಿಲ್ಲ.