ದೇಶ ಅಭಿವೃದ್ಧಿ ಹೊಂದಬೇಕೆಂದರೆ ದೇಶದಲ್ಲಿನ ಗ್ರಾಮಗಳು ಅಭಿವೃದ್ಧಿ ಹೊಂದಬೇಕು ಎಂಬುದು ಗಾಂಧೀಜಿಯವರ ಪರಿಕಲ್ಪನೆ ಆಗಿತ್ತು. ಗ್ರಾಮ ಸ್ವರಾಜ್ಯ ಎನ್ನುವಂತಹದ್ದು ಗಾಂಧೀಜಿಯವರ ಕನಸು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು. ಅವರು ಶನಿವಾರ ರೈತ ಸಂಘ, ಪುಟ್ಟಣ್ಣಯ್ಯ ಟ್ರಸ್ಟ್ ವತಿಯಿಂದ ಪಾಂಡವಪುರ ಕ್ರೀಡಾಂಗಣದಲ್ಲಿ ನಡೆದ ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶೇ.15 ರಷ್ಟು ಜನ ಐಟಿಬಿಟಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಶೇ. 60 ರಿಂದ 70 ರಷ್ಟು ಜನ ಸಣ್ಣ ಕೈಗಾರಿಕೆಗೆ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆ, ರಾಜ್ಯದಲ್ಲಿ ಸಣ್ಣ ಕೈಗಾರಿಕೆ, ಕೃಷಿ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಹೊಂದಬೇಕು ಎಂದರು.