ಮಳವಳ್ಳಿ : ಪಟ್ಟಣದ ಜೆ ಎಂ ಎಫ್ ಸಿ ನ್ಯಾಯಾಲಯದ ಆವರ ಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯ ಬುಧವಾರ ರಾತ್ರಿ 7.30 ರ ಸಮಯದಲ್ಲಿ ಬಹು ವಿಜೃಂಭಣೆ ಯಿಂದ ಜರುಗಿತು. ಸೆಪ್ಟೆಂಬರ್ 27 ರಂದು ವಕೀಲರ ಸಂಘದ ವತಿಯಿಂದ ನ್ಯಾಯಾಲ ಯದ ಆವರಣದಲ್ಲಿ ಪ್ರತಿಷ್ಠಾಪಿ ಸಲಾಗಿದ್ದ ಗಣೇಶ ಮೂರ್ತಿಗೆ ಪ್ರತಿನಿತ್ಯ ಪೂಜೆ ಪುನಸ್ಕಾರಗಳ ಜೊತೆಗೆ ನಿತ್ಯ ಪ್ರಸಾದ ವಿನಿಯೋಗ ಸಹ ನಡೆಯುತ್ತಿತ್ತು. ಬುಧವಾರ ಸಂಜೆ 7 ಗಂಟೆ ಸಮ ಯದಲ್ಲಿ ಅಲಂಕೃತ ವಾಹನದಲ್ಲಿ ಗಣೇಶ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾ ರತಿ ಮಾಡಿದ ನಂತರ ನ್ಯಾಯಾಧೀಶರು ವಕೀಲರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.