ಮಕ್ಕಳ ಸಾಧನೆಗೆ ಆತ್ಮವಿಶ್ವಾಸ ಬಹಳ ಮುಖ್ಯ ; ಜಿಲ್ಲಾಧಿಕಾರಿ ರವಿ ಕೋಲಾರ : ಮಕ್ಕಳ ಸಾಧನೆಗೆ ಆತ್ಮವಿಶ್ವಾಸ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳ ಓದಿನ ಜೊತೆಗೆ ಕರಾಟೆ ಕಲೆ ಸೇರಿದಂತೆ ಇನ್ನಿತರೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವುದರ ಮೂಲಕ ಪರಿಪೂರ್ಣತೆ ಹೊಂದಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು. ಬ್ರೂಸ್ಲಿ ಕರಾಟೆ ಶಾಲೆಯ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಆತ್ಮರಕ್ಷಣೆಗಾಗಿ ಕರಾಟೆ ಕಲೆಯನ್ನು ಕಲಿಯವುದು ಬಹಳ ಮುಖ್ಯ ಅದರಲ್ಲೂ ಹೆಣ್ಣುಮಕ್ಕಳು ಕರಾಟೆ ಕಲೆಯತ್ತ ಹೆಚ್ಚು ಒಲವು ತೋರಬೇಕೆಂದರು.