ಮೈಸೂರು ದಸರಾ ಈ ಬಾರಿ ತುಂಬಾ ವಿವಾದಾತ್ಮಕವಾಗಿ ಚರ್ಚೆಯಾಗುತ್ತಿದೆ ಬಾನು ಮುಷ್ತಾಕ್ ಅವರು ಸಾಹಿತಿಯಾಗಿ ಅವರ ಬಗ್ಗೆ ನಮಗೆ ಗೌರವವಿದೆ.ಆದರೆ ಕನ್ನಡದ ಬಗ್ಗೆ, ಚಾಮುಂಡೇಶ್ವರಿ ಬಗ್ಗೆ,ಈ ಹಿಂದೆ ಅವರು ಮಾತನಾಡಿದ ರೀತಿ ಇದೆಯಲ್ಲ ಅದು ಇಂದು ಪ್ರಶ್ನಾರ್ಹವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಶನಿವಾರ ಮಾತನಾಡಿದ ಅವರು ಸರ್ಕಾರ ಈ ಬಗ್ಗೆ ಆಲೋಚನೆ ಮಾಡಬೇಕು ಚಾಮುಂಡಿ ಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂದು ಹೇಳುತ್ತಾರೆ ಹಿಂದೂಗಳ ಬಗ್ಗೆ ಪೂರ್ವಗ್ರಹ ಪೀಡಿತವಾದ ಸರ್ಕಾರ ಈ ರಾಜ್ಯದಲ್ಲಿದೆ ಎನ್ನುವುದು ನಮ್ಮ ದುರಾದೃಷ್ಟಕರ ಎಂದರು.