GST ವಿನಾಯಿತಿ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಮಹೇಶ್ ತೆಂಗಿನಕಾಯಿ ಅವರು, ಈ ದೇಶದ ಪ್ರಧಾನಿ ಮೋದಿ ಬಡವರ ಪರವಾಗಿ ಕೆಲಸ ಮಾಡ್ತಾರೆ. ದಸರಾ, ದೀಪಾವಳಿಗೆ ಉಡುಗೊರೆ ನೀಡಿದ್ದಾರೆ. ಆರೋಗ್ಯ ವಿಚಾರದಲ್ಲಿ ಕ್ಯಾನ್ಸರ್ ಸೇರಿದಂತೆ, 33 ಆರೋಗ್ಯದ ಪರಿಕರ ಇಳಿಸಿದ್ದಾರೆ. ಕೃಷಿ ಕ್ಷೇತ್ರದಲ್ಲೂ ಕಡಿಮೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು GST ಸರಳೀಕರಣ ಮಾಡುವ ಕೆಲಸ ಮಾಡಿದ್ದಾರೆ ಎಂದರು.