ಏಳು ವರ್ಷಗಳ ಬಳಿಕ ಮಾಣಿ ಜಲಾಶಯ ಭರ್ತಿಯಾಗಿದೆ. ಹೌದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮಾಣಿ ಜಲಾಶಯ ಏಳು ವರ್ಷಗಳ ಬಳಿಕ ಭರ್ತಿಯಾಗಿದ್ದು, ಬುಧವಾರ ಕೆಪಿಟಿಸಿಎಲ್ ಅಧಿಕಾರಿಗಳು ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಜಲಾಶಯದ ಗೇಟ್ ತೆಗೆದು ನೀರನ್ನು ನದಿಗೆ ಬಿಟ್ಟಿದ್ದಾರೆ. ಇನ್ನು ಜಲಾಶಯವನ್ನ ನೋಡಲು ಸಾರ್ವಜನಿಕರು ಆಗಮಿಸಿದ್ದರು.ಮಾಣಿ ಜಲಾಶಯದ ಪ್ರಕೃತಿ ಸೌಂದರ್ಯ ಸವಿದು ಪುಳಕಿತರಾದರು.