ಸದನದಲ್ಲಿ ಶಾಸಕರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ವಿ.ಪ.ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.ಜಮಖಂಡಿ ನಗರದ ರಮಾನಿವಾಸದಲ್ಲಿ ಮಾತನಾಡಿರುವ ಅವರು ಅಭಿವೃದ್ಧ ವಿಚಾರದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷಿಸಲಾಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ದುರ್ದೈವದ ಸಂಗತಿ ಎಂದರೆ ನಮ್ಮವರು ಸದನದಲ್ಲಿ ಎದ್ದು ಕಾರ್ಯಗಳ ಬಗ್ಗೆ ಮಾತನಾಡೋದಿಲ್ಲ. 46 ಶಾಸಕರು ಇದ್ದಾರೆ.ಆದರೆ ಕರಾವಳಿ ಭಾಗದ ಆ ಕಡೆ ಜಿಲ್ಲೆಯವರು ಕೆಲಸವನ್ನು ತೆಗೆದುಕೊಳ್ಳುತ್ತಾರೆ.ಅವರ ಹಾಗೆ ನಮ್ಮವರು ಕೆಲಸ ತೆಗೆದುಕೊಳ್ಳಬೇಕು ಎಂದರು. ಇನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಕೆಲವರು ದುಡ್ಡು ತೆಗೆದುಕೊಂಡು ಮತ ಹಾಕ್ತಾರೆ,ಶಿಕ್ಷಕರ ಕ್ಷೇತ್ರವನ್ನೂ ಬಿಟ್ಟಿಲ್ಲ ಎಂದರು.