*ತಾಲೂಕಾ ಮಟ್ಟದ ವಿಜ್ಞಾನ ಚಟುವಟಿಕೆಗಳ ಸ್ಪರ್ಧೆ ಬಸವಕಲ್ಯಾಣ:* ದಿನಾಂಕ : 06.09.2025 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಗಸ್ತ್ಯ ಫೌಂಡೇಶನ್ ಬಸವಕಲ್ಯಾಣ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ, ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ, ವಸ್ತು ಪ್ರದರ್ಶನ ಮತ್ತು ನಾವಿನ್ಯತೆ ಮೇಳವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ಶಾಲಾ ವಿಭಾಗ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉಪ ಪ್ರಾಂಶುಪಾಲರಾದ ಶ್ರೀಮತಿ ಅನೀತಾ ಸಾವಳ್ಕರ ಅವರು ಉದ್ಘಾಟಿಸಿ ಮಾತನಾಡುತ್ತಾ "ಜೈ ಜವಾನ್ ಜೈ,ಕಿಸಾನ್ ಜೈ, ವಿಜ್ಞಾನ" ಎಂಬ ಮಾತು ಅರ್ಥಪೂರ್ಣವಾದದ್ದು ಎಂದು ಹೇಳಿದರು . ಕಾರ್ಯಕ್ರಮದ ನೋಡಲ್ ಅಧಿಕಾರಿ ಶಾಲಿವಾನ