ಕಲಬುರಗಿ : ನಿರೀಕ್ಷೆಗಿಂತ ಈ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.. ಈಗಾಗಲೇ ಬೆಳೆ ಹಾನಿ ಬಗ್ಗೆ ಸರ್ವೆ ನಡೆಸಲಾಗ್ತಿದೆಯೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಹೇಳಿದ್ದಾರೆ.. ಸೆ2 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಸತತ ಮಳೆಯಿಂದ ತೊಗರಿಗೆ ಹೆಚ್ಚು ಹಾಳಾಗಿದೆ.. ಜೊತೆಗೆ ಉದ್ದು, ಹೆಸರು, ಸೋಯಾ ಸೇರಿದಂತೆ ಇನ್ನಿತರ ಬೆಳೆಗಳು ಸಹ ಹಾನಿಯಾಗಿದ್ದು, ಸಮೀಕ್ಷೆ ಬಳಿಕ ಡಿಸಿಗೆ ವರದಿ ಸಲ್ಲಿಸಲಾಗುತ್ತದೆಂದು ಸಮದ್ ಪಟೇಲ್ ಹೇಳಿದ್ದಾರೆ