ಗುರುವಾರ ರಾತ್ರಿ ಸಂಡೂರು ಪಟ್ಟಣ ಹಾಗೂ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಭಾರೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಒಂದು ರಾತ್ರಿ ಮಾತ್ರದಲ್ಲೇ 60.80 ಮಿಮೀ ಮಳೆ ದಾಖಲಾಗಿದ್ದು, ಗ್ರಾಮೀಣ ಭಾಗದ ಬೆಳೆಗಳು ನೆಲಕ್ಕುರುಳಿ ಹಾನಿಗೊಳಗಾಗಿವೆ.ಸೆಪ್ಟಂಬರ್ 12, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ತಾರಾನಗರ, ಯಶವಂತನಗರ, ಗೊಲ್ಲರಹಳ್ಳಿ, ಜೋಗ ಸೇರಿ ಹಲವು ಗ್ರಾಮಗಳಲ್ಲಿ ಕೃಷಿ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ, ಅನೇಕ ಮನೆಗಳು ಹಾಗೂ ರಸ್ತೆಗಳು ಮಳೆಯಿಂದ ಹಾನಿಗೊಂಡಿದ್ದು, ಸಾರಿಗೆ ವ್ಯವಸ್ಥೆಯಲ್ಲೂ ಅಡಚಣೆ ಉಂಟಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ