ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 15 ದಿನಗಳಿಂದ ಕುಡಿಯಲು,ಅಡುಗೆ ಮಾಡಲು, ಶೌಚಾಲಯ ಬಳಕೆಗೆ ನೀರೇ ಇಲ್ಲದ ವಿದ್ಯಾರ್ಥಿನಿಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗದೆ ಶುಕ್ರವಾರ ವಿದ್ಯಾರ್ಥಿನಿಯರು ನೀರಿಗಾಗಿ ಧರಣಿಯನ್ನು ಮಾಡಿದರು. ವಿದ್ಯಾರ್ಥಿ ನಿಲಯದಲ್ಲಿ ನೀರು ಇಲ್ಲದಿರುವುದರಿಂದ ಶೌಚಾಲಯದಲ್ಲಿ ಹನಿ ನೀರು ಇಲ್ಲದಿರುವುದರಿಂದ ಗಬ್ಬು ವಾಸನೆ ಬರುತ್ತಿದೆ. ಶೌಚಕ್ಕೆ ಹೊರಗಡೆಯೂ ಹೋಗುವಂತಿಲ್ಲ. ದುರ್ವಾಸನೆಯಲ್ಲಿಯೇ ಮೂಗು ಮುಚ್ಚಿಕೊಂಡು ಶೌಚಕ್ಕೆ ಹೋಗುವಂತಾಗಿದೆ’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿ ಕೊಂಡರು.ವಿದ್ಯಾರ್ಥಿ ನಿಲಯದಲ್ಲಿ ಬೋರ್‌ವೆಲ್ ಇದ್ದರು.ಸಹ ನೀರಂತು ಬರುತ್ತಿಲ್ಲ ಎಂದರು