ಇಲ್ಲಿಯ ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಶಶಿಕಲಾ ಮಾಳಗಿ ಅಧ್ಯಕ್ಷತೆಯಲ್ಲಿ ಸೋಮವಾರ ವಿಶೇಷ ತುರ್ತು ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ನಗರಸಭೆ ಮಾಲ್ಕಿ ಮಳಿಗೆಗಳಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿರುವುದೇ ನೇರ ಕಾರಣವಾಗಿದ್ದು, ನಗರಸಭೆ ಆದಾಯದ ಮೂಲವೇ ಕುಂಠಿತವಾಗುತ್ತಿದೆ ಎಂದು ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದರು. ನಗರಸಭೆ ವ್ಯಾಪ್ತಿಯಲ್ಲಿ 2017-25ರ ವರೆಗೆ 243 ಮಳಿಗೆಗಳಿವೆ. 2017ರಲ್ಲಿ ಸಿಂಗಲ್ ಟೆಂಡರ್ ಆಗಿರುವ 93 ಮಳಿಗೆಗಳು ಇವತ್ತಿಗೂ ಹಳೆ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ ಎಂದರು.