ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 2024–25ನೇ ಸಾಲಿನ ಅನುನಿಯಂತ್ರಿತ ಅನುದಾನದಡಿ ಕಟ್ಟಲಾಗುತ್ತಿರುವ ಕಟ್ಟಡಗಳು ಹಾಗೂ ಅಂಗಡಿ ಮಳಿಗೆಗಳು ಕಳಪೆ ಕಾಮಗಾರಿಯ ಬಲಿಯಾಗುತ್ತಿರುವುದನ್ನು ಗಮನಿಸಿದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐಎಂ ಹಾಗೂ ಡಿವೈಎಫ್ ಐ ಮುಖಂಡರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಕೆಆರ್ ಐಡಿಎಲ್ ರವರು ಈ ಕಟ್ಟಡಗಳ ನಿರ್ಮಾಣದ ಜವಾಬ್ದಾರಿ ನೀಡಲಾಗಿತ್ತು. ಆದರೆ ಸಂಸ್ಥೆಯೇ ಗುತ್ತಿಗೆದಾರರೊಂದಿಗೆ ಕೈಜೋಡಿಸಿ, ಕಟ್ಟಡಗಳನ್ನು ಸರ್ಕಾರದ ನಿಯಮಾವಳಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಳಪೆ ರೀತಿಯಲ್ಲಿ ಕಟ್ಟುತ್ತಿರುವುದನ್ನು ಸಿಪಿಐಎಂ ಮುಖಂಡರು ಗಂಭೀರವಾಗಿ ಆರೋಪಿಸಿದರು.