ರಾಷ್ಟ್ರೀಯ ಹೆದ್ದಾರಿ ರೈಲ್ವೆ ಸ್ಟೇಷನಿಗೆ ಹೋಗುವ ಬಳಿ ತಿರುವು ಬಳಿ, ಹೆರ್ಗ ವ್ಯವಸಾಯ ಸೊಸೈಟಿಯ ಮುಂಬಾಗ ಜಾರ್ಜ್ ಫೆರ್ನಾಂಡಿಸ್ ರಸ್ತೆಯ ಸನಿಹ ಚೆಂಬರ್ ಮುಚ್ಚಳ ಕುಸಿದುಬಿದ್ದು, ಮೃತ್ಯು ಕೂಪ ನಿರ್ಮಾಣವಾಗಿದೆ. ಇದು ಬಸ್ ತಂಗು ದಾಣ ಹಾಗೂ ವಾಹನ ಸಂಚಾರ ಇರುವ ರಸ್ತೆಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಸಮಸ್ಯೆ ಬಗೆಹರಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಪಡಿಸಿದ್ದಾರೆ.