ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಡೇಜಾಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಕರಡಿ ಪ್ರತ್ಯಕ್ಷವಾಗಿ ರಸ್ತೆಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು ಪೊದೆಗಳಲ್ಲಿ ಕರಡಿಗಳು ಆಶ್ರಯ ಪಡೆದಿವೆ. ಕರಡಿಯೊಂದು ರಾಜಾರೋಷವಾಗಿ ರಸ್ತೆ ದಾಟುತ್ತಿರುವುದನ್ನು ದಾರಿಹೋಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೇಕೇ ಹಾಕಿ,ಕೂಗಾಟ ನಡೆಸಿದ ಪರಿಣಾಮ ಕರಡಿ ಓಡುತ್ತಿರುವುದು ವಿಡಿಯೋ ದಲ್ಲಿ ಕಂಡು ಬಂದಿದೆ. ಈ ಭಾಗದಲ್ಲಿ ಹೊಲ, ಗದ್ದೆಗಳಲ್ಲಿ ಗುಡಿಸಲು, ಮನೆ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ಬಹಳಷ್ಟು ಜನರಿದ್ದು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸೆಪ್ಟೆಂಬರ್ 03 ರಂದು ಮಧ್ಯಾಹ್ನ 3-30 ಗಂಟೆಗೆ ಸ್ಥಳೀಯರು ತಿಳಿಸಿದ್ದಾರೆ.