ಗಗನಚುಕ್ಕಿ ಜಲಪಾತೋತ್ಸವದಲ್ಲಿ ಆಯೋಜಿಸಿರುವ ಲೇಸರ್ ಶೋ ಪ್ರವಾಸಿಗರ ಗಮನ ಸೆಳೆದಿದೆ. ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತದ ಬಳಿ 2 ದಿನಗಳ ಕಾಲ ಆಯೋಜಿಸಿರುವ ಉತ್ಸವದ ನಿಮಿತ್ತ ಶನಿವಾರ ರಾತ್ರಿ 8 ಗಂಟೆಯಲ್ಲಿ ನಡೆದ ಲೇಸರ್ ಶೋ ಪ್ರಮುಖ ಆಕರ್ಷಣೆಯಾಗಿದೆ. ಜಲಪಾತದ ಬಳಿ ಧುಮ್ಮಿಕ್ಕುತ್ತಿರುವ ನೀರಿಗೆ ಬೀಳುವ ಬಣ್ಣ ಬಣ್ಣದ ಲೇಸರ್ ಬೆಳಕಿನ ಕಿರಣಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಸಂಗೀತದ ಸದ್ದಿಗೆ ಅನುಗುಣವಾಗಿ ಬೆಳಕಿನ ಚಿತ್ತಾರ ಮೂಡಿ ನೆರೆದವರ ಗಮನ ಸೆಳೆಯಿತು. ಭಾನುವಾರ ಸಂಜೆಯೂ ಲೇಸರ್ ಶೋ ನಡೆಯಲಿದೆ.