ಇತಿಹಾಸ ಪ್ರಸಿದ್ಧ ಕೋಟಿಲಿಂಗೇಶ್ವರ ಕ್ಷೇತ್ರವೆಂದೇ ಪ್ರಖ್ಯಾತಿ ಪಡೆದ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇಗುಲ ನಿಮಾತೃ ಲಿಂಗೈಕ್ಯ ಶ್ರೀ ಶ್ರೀ ಸಾಂಭಶಿವಮೂರ್ತಿ ಸ್ವಾಮೀಜಿಗಳ 79 ನೇ ಹುಟ್ಟು ಹಬ್ಬದ ಪ್ರಯುಕ್ತ ದೇಗುಲ ಆಡಳಿತಾಧಿಕಾರಿ ಕೆ.ವಿ ಕುಮಾರಿ ನೇತೃತ್ವದಲ್ಲಿ ಶನಿವಾರ ವಿವಿಧ ಸಮಾಜಮುಖಿ ಸೇವೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿಜೃಂಭನೆಯಿಂದ ಜನ್ಮದಿನವನ್ನು ಆಚರಿಸಿದರು.ಗ್ರಾಮದ ಬಳಿಯ ಕಮ್ಮಸಂದ್ರದ ದೇಗುಲ ಆವರಣದ ಮುಕ್ತಿ ಮಂದಿರದಲ್ಲಿ ಸ್ವಾಮೀಜಿಯ ಸಮಾಧಿಯ ಮೇಲೆ ಪ್ರತಿಷ್ಠಾಪಿಸಿರುವ ಸ್ವಾಮೀಜಿಯ ಮೂರ್ತಿ ಹಾಗೂ ಮಂಟಪಕ್ಕೆ ವಿಶೇಷವಾಗಿ ವಿವಿಧ ಬಣ್ಣಗಳ ಹೂಗಳಿಂದ ಅಲಂಕಾರ ಮಾಡಿ, ಹೋಮ, ಹವನ ಪೂಜೆ, ತೀರ್ಥ ಪ್ರಸಾದ ವಿತರಿಸಿ, ನಂತರ ಬೆಳ್ಳಿ ಪಲ್ಲಕ್ಕಿಯಲ್ಲಿ ಸ್ವಾಮಿಯ ಪ್ರತಿಮೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು