Download Now Banner

This browser does not support the video element.

ಸಾಲಿಗ್ರಾಮ: ಸಾಲಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಮೊಬೈಲ್ ಬ್ಲಾಸ್ಟ್ ಅಂತಾ ಕತೆ ಕಟ್ಟಿದ್ದ ಪ್ರಿಯಕರನ ಬಂಧನ

Saligrama, Mysuru | Aug 25, 2025
ತನ್ನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಬಾಯಿಗೆ ತಾನೇ ಜಿಲೆಟಿನ್ ಕಡ್ಡಿ ಹಾಕಿ ಬ್ಲಾಸ್ಟ್ ಮಾಡಿ, ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕು ಭೇರ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತ(20) ಕೊಲೆಯಾದ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಎಂಬಾತನೇ ಈ ಕೃತ್ಯವೆಸಗಿರುವುದು. ಕೇರಳ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ರಕ್ಷಿತಾ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಮಧ್ಯೆ ಆರೋಪಿ ಸಿದ್ದರಾಜು ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಕರೆದಿದ್ದು ನಂತರ ಲಾಡ್ಜ್ ನಲ್ಲಿ ಮಹಿಳೆ ರಕ್ಷಿತಾಳನ್ನ ಕೊಲೆ‌ ಮಾಡಿ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದ.
Read More News
T & CPrivacy PolicyContact Us