ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸಾವನ್ನಪ್ಪಿರುವ ಯುವಕ ಚಿಂತಾಮಣಿ ನಗರದ ಅಬ್ಬುಗುಂಡು ಬಳಿಯ ನಿವಾಸಿ ಹಾಗೂ ಸರ್ಕಾರಿ ಆಸ್ಪತ್ರೆ ಮುಂಭಾಗದ ಸಾಧಿಕ್ ಹಣ್ಷಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಬಾಜ್ ರವರಾಗಿದ್ದು, ಕತ್ತಿರಿಯದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿರುವ ಯುವಕ ವಾಸಿಂ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪರ್ಹಾಜ್ ರವರಾಗಿದ್ದಾರೆ.ಮಂಗಳವಾರ ಸಂಜೆ ಕ್ಷುಲ್ಲಕ್ಕ ಕಾರಣಕ್ಜೆ ಮೃತ ಅರ್ಬಾಜ್ ಹಾಗೂ ಪರ್ಹಾಜ್ ನಡುವೆ ಗಲಾಟೆ ನಡೆದು, ಪರ್ಹಾಜ್ ಆರ್ಬಾಜ್ ರವರ ಕುತ್ತಿಗೆಗೆ ಕತ್ತಿರಿಯಿಂದ ಚುಚ್ಚಿ ಗಾಯ ಮಾಡಿದ್ದು, ಕೂಡಲೇ ಅರ್ಬಾಜ್ ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೋಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿತ್ತು,