ದಾಂಡೇಲಿ : ನಗರದ ವಿವಿಧ ಗಣೇಶ ಮಂಡಲಕ್ಕೆ ವಿದ್ವಾಂಸಕ ಕೃತ್ಯ ತಪಾಸಣಾ ತಂಡ ಹಾಗೂ ಶ್ವಾನ ದಳವು ಇಂದು ಗುರುವಾರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತು. ನಗರದ ಕೆ ಸಿ ವ್ರತದ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕುಳಗಿ ರಸ್ತೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಗಾಂಧಿನಗರದ ಶ್ರೀ ಗಣೇಶ ಹಿಂದೂ ಮುಸ್ಲಿಂ ಕ್ರೈಸ್ತ ಯುವಕ ಮಂಡಳದ ಗಣೇಶ ಪೆಂಡಾಲಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತು.