ಎನ್‌ಸಿಸಿ ಸೆಲೆಕ್ಷನ್ ವೇಳೆಯೇ ಕುಸಿದು ಬಿದ್ದ ಐಐಟಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡದ ಐಐಟಿ ಕ್ಯಾಂಪಸ್‌ನಲ್ಲಿ ನಡೆದಿದೆ. ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಎಂಬ ವಿದ್ಯಾರ್ಥಿಯೇ ಎನ್‌ಸಿಸಿ ಸೆಲೆಕ್ಷನ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದ ಸಾವನ್ನಪ್ಪಿದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈ ಕುರಿತು ಸೋಮವಾರ ಮಧ್ಯಾಹ್ನ 2 ಗಂಟೆಗೆ ಐಐಟಿ ಕ್ಯಾಂಪಸ್ ಮ್ಯಾನೇಜ್ಮೆಂಟ್ ಅಡ್ವೈಸರ್ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.