ನಗರದಲ್ಲಿ ಗಣೇಶೋತ್ಸವ ಮೆರವಣಿಗೆ ಮಾರ್ಗ ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ. ನಗರದ ಬೋಗಾರವೆಸ್ ನಿಂದ ಹಿಂದವಾಡಿಯವರೆಗಿನ ಮೆರವಣಿಗೆ ಮಾರ್ಗ, ಸಾರ್ವಜನಿಕ ಗಣೇಶ ವಿಸರ್ಜನೆಗಾಗಿ ಕಪಿಲೇಶ್ವರ ಮತ್ತು ಜಕ್ಕೇರಿ ಹೊಂಡಗಳನ್ನು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಶುಕ್ರವಾರ ಪರಿಶೀಲಿಸಿದರು ಮೆರವಣಿಗೆ ಸುಗಮವಾಗಿ ನಡೆಯಲು ಮತ್ತು ಯಾವುದೇ ಅಡಚಣೆ ಉಂಟಾಗದಂತೆ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಪೊಲೀಸ ಅಧಿಕಾರಿಗಳಿಗೆ ಸೂಚನೆ ನೀಡಿದರು.