ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದಿದ್ದ ಧಾರಾಕಾರ ಮಳೆಗೆ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಚಿಕ್ಕಮಗಳೂರು ತಾಲೂಕಿನ ಮತ್ತಿಖಂಡ ಗ್ರಾಮದ ಶೇಖರ್ ಎಂಬುವವರ ಮನೆ ಸಂಪೂರ್ಣವಾಗಿ ನೆಲೆಸಮವಾಗಿದ್ದು. ಸಾರಗೋಡು ಗ್ರಾಮದ ಲಕ್ಷ್ಮಿ ಎಂಬುವರ ಮನೆಯ ಒಂದು ಗೋಡೆ ನೆಲಕ್ಕುರುಳಿದ್ದು ಪೂರ್ತಿ ಮನೆ ಕುಸಿದು ಬೀಳುವ ಆತಂಕದಲ್ಲಿದ್ದಾರೆ.