ಬೆಳಗಾವಿ ನಗರದಲ್ಲಿ ಇಂದು ಬುಧುವಾರ 1 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಗಣೇಶ ಉತ್ಸವ ಮಂಡಳಿಗಳಿಗೆ ಹೊಸ ಕಂಡಿಷನ್ಸ್ ಹಾಕಲಾಗಿದೆ ಗಣೇಶ್ ವಿಸರ್ಜನೆ ಮಾರ್ಗ ಬದಲಾವಣೆ ಮಾಡಲು ಪೊಲೀಸರು ಹೇಳಿದ್ದಾರೆ ಹಾಗೇಯೆ ಪಟಾಕಿ ಹಾರಿಸಿದ್ರೆ ಕೇಸ್ ಹಾಕಲಾಗುವುದು ಅಂತ ಹೇಳಿದ್ದಾರೆ ನಾವು ಗಣಪತಿ ಮಂಡಳಿಗಳ ಸಭೆ ಮಾಡಿದ ವೇಳೆ ಇವೆಲ್ಲಾ ತಿಳಿಸಿದ್ರು ಕೆಲವು ಠಾಣೆಗಳಲ್ಲಿ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡು ಅಂಜಿಕೆ ಹಾಕುವ ಕೆಲಸ ಮಾಡಿದ್ದಾರೆ ಇವೆಲ್ಲ ವಿಷಯವನ್ನ ನಾನು ಪೊಲೀಸ್ ಕಮೀಷನರ್ ಅವರಿಗೆ ಗಮನಕ್ಕೆ ತಂದಿದ್ದೇನೆ ಹಾಗಾಗಿ ಗಲಭೆಗಳು ಆಗಬಾರದು ಅಂತ ಕಮೀಷನರ್ ಅವರಿಗೆ ಹೇಳಿದ್ದೇನೆ ಎಂದರು.