ಚಿಂತಾಮಣಿ ತಾಲ್ಲೂಕಿನಲಿ ಈ ಬಾರಿ ಸರಿಯಾದ ಮಳೆ ಇಲ್ಲದೇ ಇದ್ದರು ಸಹ ಪ್ರತಿ ವರ್ಷ ಗಣೇಶನ ಹಬ್ಬವನ್ನು ಸಂಡಗರ ಸಂಬ್ರಮದಿAದ ಆಚರಣೆ ಮಾಡುತ್ತಾರೆ. ಆದರೆ ಈ ಬಾರಿ ಮಳೆ ಇಲ್ಲದೇ ಕರೆಕುಂಟೆಗಳಲ್ಲಿಯೂ ಸಹಾ ನೀರು ಇಲ್ಲದೇ ಬತ್ತಿಹೊಗಿ ಗಣೇಶನ ಮೂರ್ತಿಗಳನ್ನು ಬಿಡಲು ಸಹಾ ನೀರಿಲ್ಲ, ಮಾರುಕಟ್ಟೆಗೆ ಹಲವು ಬಗೆ ಬಗೆಯ ಗಣೇಶನ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಗಣೇಶನ ಮೂರ್ತಿಗಳಿಗೆ ಬಾರಿ ಬೇಡಿಕೆಯುಂಟಾಗಿ ಬೆಲೆ ಹೆಚ್ಚಾಗಿದ್ದರೂ ಸಹಾ ಯುವಕರು ಯಾವುದನ್ನು ಲೇಖಿಸದೇ ತಮಗೆ ಇಷ್ಟವಾದ ಗಣೇಶನ ಮೂರ್ತಿಗಳನ್ನು ಖರೀದಿ ಮಾಡಿಕೊಂಡು ತಮ್ಮಮ್ಮ ಊರುಗಳಿಗೆ ಕೊಂಡ್ಯೂತ್ತಿದ್ದ ದೃಶ್ಯಗಳು ಚಿಂತಾಮಣಿಯಲ್ಲಿ ಸಾಮಾನ್ಯವಾಗಿದ್ದವು.