ತಾಲೂಕಿನ ಹುಣಸಿಹಾಳಹುಡಾ ಗ್ರಾಮದಲ್ಲಿ ಒಂದೆಡೆ ಸುಡು ಬಿಸಿಲು ಮತ್ತೊಂದೆಡೆ ಮಳೆ ಸುರಿದ ಪ್ರಸಂಗ ಸಾರ್ವಜನಿಕರನ್ನು ಚಕಿತಗೊಳಿಸಿತು. ಹೌದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಹದಿನೈದು ನಿಮಿಷಗಳ ಕಾಲ ಮಳೆ ಸುರಿಯಿತು. ಅದು ಕೂಡ ಒಂದು ಕಿ.ಮೀ ದೂರದಲ್ಲಿ ಯಾವುದೇ ಮಳೆಯಿಲ್ಲ. ಒಂದು ಕಿಲೋ ಮೀಟರ್ ಸುತ್ತುವರಿದ ಪ್ರದೇಶದಲ್ಲಿ ಮಾತ್ರ ಮಳೆ ಸುರಿಯಿತು. ಹತ್ತಿರದ ಶ್ರೀನಿವಾಸ ಕ್ಯಾಂಪ್, ವಿಜಯ ನಗರ ಕ್ಯಾಂಪ್ ಗಳಲ್ಲಿ ಮಳೆಯಿಲ್ಲ. ಒಂದು ಕಡೆ ಬಿಸಿಲು, ಮತ್ತೊಂದು ಕಡೆ ಮಳೆ ಸುರಿದಿದ್ದನ್ನು ಕಂಡು ಜನ ಆಶ್ಚರ್ಯಪಟ್ಟರು.