Download Now Banner

This browser does not support the video element.

ದಾವಣಗೆರೆ: ನಗರದಿಂದ 'ಧರ್ಮಸ್ಥಳ ಕಡೆಗೆ ಭಕ್ತರ ನಡಿಗೆ': ಧರ್ಮದ ಉಳಿವಿಗಾಗಿ 2 ಸಾವಿರ ಜನ ಯಾತ್ರೆ

Davanagere, Davanagere | Sep 4, 2025
ದಾವಣಗೆರೆ ನಗರದಿಂದ ಶ್ರೀ ಮಂಜುನಾಥ ಸ್ವಾಮಿಯ ಭಕ್ತರು ಧರ್ಮಸ್ಥಳ ಕಡೆಗೆ ಗುರುವಾರ ಬೆಳಗ್ಗೆ 8 ಗಂಟೆಗೆ ಯಾತ್ರೆ ನಡೆಸಿದರು. ದಾವಣಗೆರೆ ಜನರ ಧರ್ಮಸ್ಥಳ ಕಡೆಗೆ ಹೆಸರಿನಲ್ಲಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು‌‌ ವಿರೋಧಿಸಿ ಯಾತ್ರೆಯನ್ನು ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಭಕ್ತರು, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ‌ ದಿನೇಶ್ ಕೆ‌‌ ಶೆಟ್ಟಿ ಅವರು, ಕೆಲವು ಜನ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಧರ್ಮಸ್ಥಳದ ಪರವಾಗಿ ದಾವಣಗೆರೆ ಭಕ್ತರು ಇದ್ದೇವೆ. ದಾವಣಗೆರೆಯಿಂದ 2 ಸಾವಿರ ಜನರು ಧರ್ಮಸ್ಥಳಕ್ಕೆ‌ ತೆರಳುತ್ತಿದ್ದು, ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಬಂದು ಸೇರಲಿದ್ದಾರೆ ಎಂದರು.
Read More News
T & CPrivacy PolicyContact Us