ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಹೇಳತೀರದಾಗಿದೆ. ಗಣೇಶ ಹಬ್ಬದ ದಿನವೇ ಅಡಕೆ, ತೆಂಗು, ಕಾಫಿ ತೋಟವನ್ನ ಕಾಡಾನೆ ನಾಶ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಕಾಡಾನೆ ತೋಟ ನಾಶ ಮಾಡಿದ್ದು. ರೈತರು ಕಂಗಾಲಾಗಿ ಹೋಗಿದ್ದಾರೆ. ಕಣತಿ, ಆಲ್ದೂರು, ಆವುತಿ ಭಾಗದಲ್ಲಿ ಕಾಡಾನೆ ಕಾಟಕ್ಕೆ ಜನ ಮನೆಯಿಂದ ಹೊರ ಬರೋದಕ್ಕೂ ಹಿಂದೇಟು ಹಾಕುವಂತಾಗಿದೆ.