ಆನ್ ಲೈನ್ ಅಪ್ ನಲ್ಲಿ ಸಾಲ ನೀಡುವುದಾಗಿ ವಂಚಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ಕಾಮಗೆರೆ ಗ್ರಾಮದ ರಾಜಪ್ಪ ಮೃತ ದುರ್ದೈವಿ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಾಜಪ್ಪ ವೀಡಿಯೋ ಡೆತ್ ನೋಟ್ ಮಾಡಿದ್ದು ವಂಚನೆ ಬಗ್ಗೆ ವಿವರಿಸಿ ಕಣ್ಣೀರಾಗಿದ್ದಾರೆ. ಧಣಿ ಕ್ಯಾಪಿಟಲ್ ಎಂಬ ಸಂಸ್ಥೆಯು ತನಗೆ ಸಾಲ ನೀಡುವುದಾಗಿ ನಂಬಿಸಿ 2.38 ಸಾವಿರ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಯುವಕ ದೂರಿದ್ದಾರೆ. ತನ್ನ ಸಾವಿಗೆ ಸಂಸ್ಥೆಯ ಅನಂತ್ ಲೂಹ, ಚಿಕ್ಕರಂಗನ್ ಕಾರಣ, ಸಾವಿನಿಂದ ನೀಡುವ ಪರಿಹಾರವನ್ನು ತಂದೆ, ತಾಯಿಗೆ ನೀಡಬೇಕೆಂದು ಹೇಳಿದ್ದಾರೆ.