ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಆಯೋಜಿಸಲಾಗಿರುವ ದೊಡ್ಡಅರಸಿನಕೆರೆ ಮುಟ್ಟನಹಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ನಂತರ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಸಮಾಜ ಘಾತಕರು, ದುಷ್ಟ ಶಕ್ತಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ಕಳಂಕ ತರಲು ಹೊರಟಿದೆ. ಅದನ್ನು ತೊಳೆಯಲು ಧರ್ಮಸ್ಥಳ ಸತ್ಯಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಧರ್ಮಸ್ಥಳ ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತಾಧಿಗಳನ್ನು ಹೊಂದಿದೆ. ಇದಕ್ಕೆ ಅಪಮಾನ ಹೊಡ್ಡಲು ಮುಂದಾಗಿದ್ದಾರೆ. ಈ ಕಳಂಕವನ್ನು ಹೋಗಲಾಡಿಸಲು ನಮ್ಮ ಜೆಡಿಎಸ್ ಪಕ್ಷದ ಕಡೆಯಿಂದ ಕಾರ್ಯಕರ್ತರು, ಅಭಿಮಾನಿಗಳು 25 ಸಾವಿರಕ್ಕೂ ಹೆಚ್ಚು ಮಂದಿ ಧರ್ಮಸ್ಥಳ ಸತ್ಯಯ