ಆನೆಗೆ ಆಹಾರ- ವಾಹನ ಸವಾರರಿಗೆ ಢವಢವ ಎಂಬಂತೆ ಕಬ್ಬಿಗಾಗಿ ಕಾದು ಲಾರಿ ಬಂದ ತಕ್ಷಣ ಅಡ್ಡ ಹಾಕಿ ಕಬ್ಬಿನ ಜಲ್ಲೆಗಳನ್ನು ಕಿತ್ತು ತಿಂದ ಘಟನೆ ಚಾಮರಾಜನಗರ- ತಮಿಳುನಾಡು ರಸ್ತೆ ಹಾದುಹೋಗುವ ಪುಣಜನೂರು ಬಳಿ ನಡೆದಿದೆ. ಕಬ್ಬು ಹಾಗೂ ತರಕಾರಿ ತುಂಬಿದ ಲಾರಿಗಳಷ್ಟೇ ಕಾಡಾನೆಯ ಟಾರ್ಗೆಟ್ ಆಗಿದ್ದು ಅದೃಷ್ಟವಶಾತ್ ವಾಹನ ಸವಾರರಿಗೆ ಈವರೆವಿಗೂ ಕಾಡಾನೆ ಯಾವುದೇ ಹಾನಿ ಮಾಡಿಲ್ಲ. ದಿನನಿತ್ಯ ವಾಹನ ಸವಾರರಿಗೆ ಕಾಡಾನೆ ಫ್ರೀ ಶೋ ನೀಡುತ್ತಿದ್ದು ಬೈಕ್ ಹಾಗೂ ಕಾರಲ್ಲಿ ತೆರಳುವವರಿಗೆ ಜೀವ ಬಾಯಿಗೆ ಬಂದಂತಾಗುವ ಪ್ರಸಂಗ ಎದುರಾಗುತ್ತಿದೆ.