ಜಲಸಂರಕ್ಷಣೆಗಾಗಿ ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ಗುರಿ ಕೋಲಾರ : ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳ ಅತ್ಯುತ್ತಮ ಅನು?ನಕ್ಕಾಗಿ ಕೋಲಾರ ಜಿಲ್ಲೆಯು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ದೇಶಾದ್ಯಂತ ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಲಸಿಂಚಾಯಿಜನ್ ಭಾಗಿಧರಿ ಅಭಿಯಾನ ಅನು?ನಗೊಳಿಸಿದೆ. ಜಲಸಂರಕ್ಷಣೆ ಕಾಮಗಾರಿಗಳ ಯಶಸ್ವಿ ಅನು?ನಕ್ಕಾಗಿ ಕೋಲಾರ ಜಿಲ್ಲೆಯು ೨೫ ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ.