Download Now Banner

This browser does not support the video element.

ಕಲಬುರಗಿ: ನಗರದ ನಾಗನಹಳ್ಳಿ ರಿಂಗ್ ರಸ್ತೆ ಸರ್ಕಲ್‌ನಲ್ಲಿ ಶಾಲಾ ವಾಹನಕ್ಕೆ ಟ್ಯಾಂಕರ್ ಡಿಕ್ಕಿ, ಇಬ್ಬರು ಮಕ್ಕಳಿಗೆ ಗಾಯ

Kalaburagi, Kalaburagi | Sep 2, 2025
ಕಲಬುರಗಿ : ಖಾಸಗಿ ಶಾಲಾ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಕಲಬುರಗಿ ನಗರದ ನಾಗನಹಳ್ಳಿ ರಿಂಗ್ ರಸ್ತೆ ಸರ್ಕಲ್‌ನಲ್ಲಿ ಸೆ2 ರಂದು ಬೆಳಗ್ಗೆ 8 ಗಂಟೆಗೆ ಸಂಭವಿಸಿದೆ.. ಎಂದಿನಂತೆ ಮಕ್ಕಳನ್ನ ಕರೆದುಕೊಂಡು ನಗರದ ಚಂದ್ರಕಾಂತ ಪಾಟೀಲ್ ಶಾಲೆಯ ವಾಹನ ಹೋಗ್ತಿರೋವಾಗ ರಿಂಗ್ ರಸ್ತೆಯಲ್ಲಿ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಮಕ್ಕಳಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ
Read More News
T & CPrivacy PolicyContact Us