ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮ ಹಾಗೂ ವಿ.ಪಾಳ್ಯ ಗ್ರಾಮದ ರಸ್ತೆ ಸ್ಥಿತಿ ಅದೋಗತಿಗೆ ಬಂದು ತಲುಪಿದೆ. ಇದರಿಂದ ವಿ.ಪಾಳ್ಯ, ಮಳಲಿ, ಬಳ್ಳೆಕಟ್ಟೆ ಸೇರಿ ಹಲವು ಹಳ್ಳಿಗಳ ಜನ್ರು ಹೈರಾಣಾಗಿದ್ದಾರೆ. ಪ್ರತಿ ನಿತ್ಯ ನೂರಾರು ವಾಹನಗಳಲ್ಲಿ ಸಂಚಾರ ಮಾಡುವ ಸಾರ್ವಜನಿಕರು ಜೀವ ಕೈಯಲ್ಲಿಡಿದು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ನೂರಾರು ಮೈನಿಂಗ್ ಲಾರಿಗಳು ಓಡಾಟ ಮಾಡುತ್ತಿದ್ದು, ಇದರಿಂದ ಇಂಥ ಸಮಸ್ಯೆ ಉಲ್ಬಣವಾಗಿದೆ. ಬೃಹತ್ ಗಾತ್ರದ ಗುಂಡಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ದುರ್ಗಮ ರಸ್ತೆಯಲ್ಲಿ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸೋಮವಾರ ಸಂಜೆ 4 ಗಂಟೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.