ಬೆಳಗಾವಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟ್ರಾಟಿಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದುದ್ದರಿಂದ,ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡುತ್ತಿರುವಾಗ ಬೆಳಗಾವಿ ನಗರದ ಗಣೇಶಪುರ ಮೇನ್ ರೋಡ, ಸೈನಿಕ ಕಾಲನಿ ಕ್ರಾಸ್ ಹತ್ತಿರ ಆರೋಪಿತರಾದ ಆಕಾಶ ಜಯರಾಂ ಪೀಟರ್(23),ಅಮನ ರಾಜ ಬಡೋದೇಕರ್ ಬೆಳಗಾವಿ ಇವರಿಬ್ಬರೂ ಒಂದು ಚೀಲದಲ್ಲಿ ಹರಿತವಾದ ತಲವಾರ ಇಟ್ಟುಕೊಂಡಾಗ ಸಿಕ್ಕಿದ್ದನ್ನ ಜಪ್ತಪಡಿಸಿಕೊಂಡು ಆರೋಪಿಗಳನ್ನ ವಶಕ್ಕ ಪಡೆದು ಇಂದು ಶುಕ್ರವಾರ 4 ಗಂಟೆಗೆ ತನಿಖೆ ಮುಂದುವರೆಸಿದ್ದು ಆರೋಪಿತರ ವಿರುದ್ಧ ಕ್ಯಾಂಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.