ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಕೆಂಪೇಗೌಡ ಯುವ ಸಮಿತಿಯು ತಮ್ಮ ಸಮಾಜಮುಖಿ ಚಟುವಟಿಕೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಪಟ್ಟಣದ ನರಸಾಪುರ ರಸ್ತೆಯಲ್ಲಿ ಪ್ರತಿ ನಿತ್ಯವೂ ದೊಡ್ಡ ಪ್ರಮಾಣ ಹಾಗೂ ಸಣ್ಣ ಪುಟ್ಟವಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ನಿಲ್ಲಿಸಲು, ಕೆಂಪೇಗೌಡ ಯುವ ಸಮಿತಿ ಸರ್ವ ಸದಸ್ಯರು ಸ್ವಯಂ ಪ್ರೇರಿತವಾಗಿ 6 ಬ್ಯಾರಿಕೇಡ್ ಗಳನ್ನು ಖರೀದಿ ಮಾಡಿ ಶನಿವಾರ ಪೊಲೀಸ್ ಇಲಾಖೆಗೆ ವಿತರಿಸಿದರು.ಇನ್ಸ್ ಪೆಕ್ಟರ್ ಬಿ.ಪಿ ಮಂಜು ಮಾತನಾಡಿ ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವ ಜೊತೆಗೆ ಇತರೆಯವರ ಜೀವ ರಕ್ಷಣೆ ಮಾಡಬೇಕು, ಪಟ್ಟಣ ಪಂಚಾಯತಿ ವ್ಯಾಪ್ತಿಯ ನರಸಾಪುರ- ವೇಮಗಲ್ ಮುಖ್ಯ ರಸ್ತೆಯಲ್ಲಿ ಆಗಾಗ ಅಪಘಾತಗಳು ಆಗುತ್ತಿತ್ತು.