ಕೆ.ಬಿ ಕ್ರಾಸ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ ಶವ ಕುಂದೂರು ಬಳಿಯ ಹೇಮಾವತಿ ನಾಲೆಯಲ್ಲಿ ಆಗಸ್ಟ್ 14 ರಂದು ತೇಲಿ ಹೋಗುತ್ತಿದ್ದನ್ನ ಸಾರ್ವಜನಿಕರು ನೋಡಿದ್ದರು, ಈವರೆಗೆ ಮಹಿಳೆಯ ಶವ ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಚಿಕ್ಕನಾಯಕನಹಳ್ಳಿ ಪಟ್ಟಣ ನಿವಾಸಿ 37 ವರ್ಷದ ಬಿಂದುಶ್ರೀ ಶವ ಎಂದು ಗುರುತಿಸಲಾಗಿದ್ದು, ಮಹಿಳೆಯ ಪತಿ ರಮೇಶ್ ಶನಿವಾರ ಸಂಜೆ ಸುಮಾರು 5 ರ ಸಮಯದಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದು, ಪತ್ನಿ ಬಿಂದುಶ್ರೀ ಶವವನ್ನ ಪತ್ತೆಹಚ್ಚಲು ಪೊಲೀಸರು ಹಾಗೂ ಹೇಮಾವತಿ ನಾಲಾ ಅಭಿಯಂತರರು ನೇರವಾಗಬೇಗು ಪತ್ನಿಯ ಅಂತಿಮ ವಿಧಿ ವಿಧಾನ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.