ಕಲಬುರಗಿ : ಮೈಸೂರು ದಸರಾ ಉತ್ಸವಕ್ಕೆ ಬಾನು ಮುಷ್ತಾಕ್‌ರನ್ನ ಆಹ್ವಾನ ಮಾಡಿದ್ದಕ್ಕೆ ಕಲಬುರಗಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆರಳಿಕೆಂಡವಾಗಿದ್ದಾರೆ.. ಆ31 ರಂದು ಮಧ್ಯಾನ 12.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ಸನಾತನ ಧರ್ಮವನ್ನ ಯಾರು ಪಾಲಿಸ್ತಾರೋ ಗೌರವಿಸ್ತಾರೋ ಅವರನ್ನ ಆಯ್ಕೆ ಮಾಡಬೇಕಿತ್ತು.. ಆದರೆ ಸಿಎಂ ಸಿದ್ದರಾಮಯ್ಯರ ಒಲೈಕೆ ತುಷ್ಠಿಕರಣ ಅತಿಯಾಗಿದ್ದು, ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ನಿಮಗೆ ಜನರೇ ಬುದ್ದಿ ಕಲಿಸ್ತಾರೆಂದು ಸಿಎಂ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ..