ಸೆಪ್ಟೆಂಬರ್ 15 ರಂದು ಬೆಳಿಗ್ಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಸೈಕಲ್ ರ್ಯಾಲಿ ಹಾಗೂ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗುವುದು, ಅಂದು ಬೆಳಿಗ್ಗೆ 8 ಗಂಟೆಗೆ 10ಮೋಟರ್ ಬೈಕ್ ಗಳ ರ್ಯಾಲಿ ಗೆ ಚಾಲನೆ ನೀಡಲಾಗುತ್ತದೆ. ಈ ರ್ಯಾಲಿಯು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾಗಿ ಬೆಂಗಳೂರಿನ ವಿಧಾನ ಸೌಧದ ವರೆಗೆ ಸಾಗಿ ಅಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮಕ್ಕೆ ಸೇರ್ಪಡೆ ಆಗಲಿದೆ.ವಿಶ್ವಕರ್ಮ ಜಯಂತಿಯ ದಿನಾಚರಣೆಯನ್ನು ಸೆಪ್ಟೆಂಬರ್ 17 ರಂದು ಹೆಚ್ಚಿನ ಜನರು ಆಗಮಿಸಿ ಅರ್ಥಪೂರ್ಣವಾಗಿ ಆಚರಿಸಲು ನೇರವಾಗಬೇಕು ಎಂದು ಡಾ.ಎನ್. ಭಾಸ್ಕರ್ ಅವರು ಮನವಿ ಮಾಡಿದರು. ಶುಕ್ರವಾರ ಜಿಲ್ಲಾಡಳಿತ, ಭವನದ ಜಿಲ್ಲಾಧಿಕಾರಿಗಳ ಕಚೇರಿ