ಮಂಚೇನಹಳ್ಳಿ ಪಟ್ಟಣದಲ್ಲಿರುವ ಪೀಳೆಕಾಂಬಾ ಭವನದಲ್ಲಿ ಜಿಲ್ಲೆಯ ಎಲ್ಲಾ ಬಲಗೈ ಸಮುದಾಯದ ಮುಖಂಡರು ಒಳ ಮೀಸಲಾತಿಸಬೇಕೆಂದು ಸುದ್ದಿಗೋಷ್ಠಿ ನಡೆಸಿದರು.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಿಂಹ ಘರ್ಜನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬಲಗೈ ಸಮುದಾಯದ ಮುಖಂಡ ವಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಈ ಸುದ್ದಿಗೋಷ್ಠಿಯ ಪ್ರಮುಖ ಉದ್ದೇಶವೇನೆಂದರೆ ಈ ಹಿಂದೆ ಸರ್ಕಾರ ಮಾಡಿದ ಜನಗಣತಿ ಪ್ರಕಾರ 40 ಲಕ್ಷ ಜನಸಂಖ್ಯೆ ಇದ್ದು, 6% ಒಳ ಮೀಸಲಾತಿ ನೀಡಿದೆ. ಆದರೆ ಪಕ್ಕದ ರಾಜ್ಯಗಳಲ್ಲಿ ಬಲಗೈ ಸಮುದಾಯಕ್ಕೆ 7.5 % ಒಳ ಮೀಸಲಾತಿ ನೀಡಿದೆ.