ದಾಂಡೇಲಿ : ಸುಭಾಷ ನಗರದ ಒಳ ಕ್ರೀಡಾಂಗಣದ ಟೆಂಡರ್ ಅವಧಿ ಮುಗಿದು 8 ತಿಂಗಳಾಗಿರುವುದರ ಜೊತೆಗೆ ಬಾಡಿಗೆ ಬಾಕಿ ಇರುವ ಹಿನ್ನಲೆಯಲ್ಲಿ ನಗರ ಸಭೆ ಪೌರಾಯುಕ್ತ ವಿವೇಕ್ ಬನ್ನೆ ಅವರ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳು ಮಂಗಳವಾರ ಸಂಜೆ 5.30 ಗಂಟೆ ಸುಮಾರಿಗೆ ಒಳ ಕ್ರೀಡಾಂಗಣವನ್ನು ಪಡೆದುಕೊಂಡಿದ್ದಾರೆ ಸೋಮವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಈ ಕ್ರೀಡಾಂಗಣದ ಅವ್ಯವಸ್ಥೆಯ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದನ್ನು ಸರಿಪಡಿಸಲು ನಗರ ಸಭೆಯ ಸದಸ್ಯರು ವಾದಿಸಿದ್ದರು. ಸಭೆಯಲ್ಲಿ ಒಳ ಕ್ರೀಡಾಂಗಣವನ್ನು ನಗರ ಸಭೆಯ ವಶಕ್ಕೆ ಪಡೆದು ಸಮಸ್ಯೆ ನಿವಾರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಮಂಗಳವಾರ ಸಂಜೆ ಒಳ ಕ್ರೀಡಾಂಗಣವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.